Vidyanidhi
ನಾರಾಯಣಗುರುಗಳ ಪ್ರೇರಣೆಯಂತೆ ವಿದ್ಯೆಗೆ ಪ್ರೋತ್ಸಹ ನೀಡುವರೇ ಸಂಘದ ವತಿಯಿಂದ ದಿನಾಂಕ 18.7.2012ರಲ್ಲಿ ನಾರಾಯಣಗುರು ವಿದಾನಿಧಿ ಟ್ರಸ್ಟ್ ದಿ| ನಾರಾಯಣ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. 80% ಕ್ಕಿಂತ ಅತೀ ಬಡತನದ ಕುಟುಂಬದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರ ವ್ಯಾಸಾಂಗವನ್ನು ಮುಂದುವರಿಸಲು ಪ್ರೋತ್ಸಾಹಿಸಲು ರೂಪಾಯಿ ಒಂದು ಕೋಟಿ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಬಿಲ್ಲವರ ಸೇವಾ ಸಂಘ ಉಡುಪಿ (ರಿ.) ಬನ್ನಂಜೆ ಹಾಗೂ
ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್
4.5 ಲಕ್ಷ ರೂಪಾಯಿ ವೆಚ್ಚಪಠ್ಯಪುಸ್ತಕ ವಿತರಣೆ
ದಿನಾಂಕ 5/06/2022 ಆದಿತ್ಯವಾರ ಶಿವಗಿರಿ ಸಭಾಗ್ರಹದಲ್ಲಿ ಬಿಲ್ಲವರ ಸೇವಾ ಸಂಘ ಉಡುಪಿ.(ರಿ) ಬನ್ನಂಜೆ ಹಾಗೂ ನಾರಾಯಣ ಗುರು ವಿದ್ಯಾನಿಧಿ ವತಿಯಿಂದ ರೂಪಾಯಿ 4.5 ಲಕ್ಷ ವೆಚ್ಚದಲ್ಲಿ ಸಮಾಜದ ಪ್ರಥಮ,ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿರುವ 380 ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲಾಯಿತು 90%ಕ್ಕಿಂತ ಮೇಲ್ಪಟ್ಟು ಅಂಕ ಪಡೆದಿರುವ 31 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಆನಂದ ಪೂಜಾರಿ ಕಿದಿಯೂರು ವಹಿಸಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯದ ಬಗ್ಗೆ ಮಾರ್ಗದರ್ಶನ ನೀಡಿದರು, ಉಪಾಧ್ಯಕ್ಷರಾದ ಸೂರ್ಯಪ್ರಕಾಶ್ ರವರು ಪ್ರಸ್ತಾವನೆ ಗೈದರು. ಮುಖ್ಯ ಅತಿಥಿಗಳಾದ ಮಂಜುನಾಥ್ ಸನ್ ಪೊಲೀಸ್ ಇನ್ಸ್ಪೆಕ್ಟರ್ ಉಡುಪಿ, ಚಂದ್ರಶೇಖರ್ ವಿ ಸುವರ್ಣ ವ್ಯವಸ್ಥಾಪಕರು ಬಾಳಿಗ ಗ್ರೂಪ್ ಆಫ್ ಕಂಪನಿ ಉಡುಪಿ ಇವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು ವೇದಿಕೆಯಲ್ಲಿ ಸಂಘದ ಮಾಜಿ ಉಪಾಧ್ಯಕ್ಷ ರಾಮಚಂದ್ರ ಕಿದಿಯೂರು, ಪಿ.ಕೆ. ಶಂಕರ್, ಜನಾರ್ಧನ. ಸಿ. ಕರ್ಕೇರ, ಶೇಖರ ಕಲ್ಮಾಡಿ, ನಾರಾಯಣ ಜತ್ತನ್, ಮಧುಸೂದನ್, ಶಶಿಧರ್ .ಎಂ. ಅಮೀನ್, ಉದಯ ಪೂಜಾರಿ, ರಾಘವೇಂದ್ರ ಅಮೀನ್, ಗೋಪಾಲ ಪೂಜಾರಿ, ಅಶೋಕ ಪೂಜಾರಿ, ಸದಾನಂದ ಅಮೀನ್, ಶ್ರೀಮತಿ ರೇಖಾ ಭಾಸ್ಕರ್, ವಿದ್ಯಾನಿಧಿ ಸಂಚಾಲಕರಾದ, ಕೃಷ್ಣಪ್ಪ ಅಂಚನ್ ನಯ್ಯಂಪಳ್ಳಿ ಡಾ|| ಸಂದೀಪ್. ಜೆ. ಸನಿಲ್, ಎಸ್.ಟಿ. ಕುಂದರ್, ಗಣೇಶ್ ಕೋಟ್ಯಾನ್ ಗುಂಡಿಬೈಲು, ಸದಾನಂದ ಪೂಜಾರಿ ಬನ್ನಂಜೆ, ವಿದ್ಯಾನಿಧಿ ದಾನಿ ಆನಂದ. ಎಂ. ಪೂಜಾರಿ ಬೈಲೂರು, ನಾರಾಯಣ ಗುರು ಕಲ್ಯಾಣ ಮಂಟಪ ನವೀಕರಣ ಸಮಿತಿ ಸದಸ್ಯರಾದ, ಜಿತೇಶ್ ಕುಮಾರ್, ಪ್ರಕಾಶ್. ಜಿ. ಕೊಡವೂರು, ಮೊದಲಾದವರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಪುರೋಹಿತರಾದ ದಯಾಕರಶಾಂತಿ ಪ್ರಾರ್ಥನೆಗೈದರು ಕಾರ್ಯದರ್ಶಿಯಾದ ಮಾಧವ ಬನ್ನಂಜೆ ಸ್ವಾಗತಿಸಿ ಧನ್ಯವಾದ ಗೈದರು.
ಬಿಲ್ಲವರ ಸೇವಾ ಸಂಘ ಉಡುಪಿ (ರಿ.) ಬನ್ನಂಜೆ
ಶ್ರೀ ನಾರಾಯಣ ಗುರು ವಿದ್ಯಾನಿಧಿ ಟ್ರಸ್ಟ್ ಬನ್ನಂಜೆ ಉಡುಪಿ
ವಿದ್ಯಾರ್ಥಿವೇತನ ವಿತರಣಾ ಸಮಾರಂಭ – 2022
ದಿನಾಂಕ 24/12/2022ರಂದು ನಾರಾಯಣಗುರು ಅಡಿಟೋರಿಯಂ ನಲ್ಲಿ ಬಿಲ್ಲವರ ಸೇವಾ ಸಂಘ (ರಿ.) ಬನ್ನಂಜೆ ಹಾಗೂ ನಾರಾಯಣಗುರು ವಿದ್ಯಾನಿಧಿ ಟ್ರಸ್ಟ್ ವತಿಯಿಂದ 80 ಶೇಕಡಾ ಕ್ಕಿಂತ ಅಧಿಕ ಅಂಕ ಪಡೆದ ಸುಮಾರು 252 ವಿದ್ಯಾರ್ಥಿಗಳಿಗೆ 10 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಹಾಗೂ 90 ಶೇಕಡಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಿ ಮಾಧವ ಪೂಜಾರಿ ಬನ್ನಂಜೆ ಇವರು ವಹಿಸಿದ್ದರು. ಮತ್ತು ವಿದ್ಯಾರ್ಥಿಗಳಿಗೆ ಹಿತವಚನವನ್ನು ಡಾ|| ಶ್ರೀ ಪ್ರಕಾಶ್ ಅಮೀನ್ ಇವರು ಮಕ್ಕಳ ಮುಂದಿನ ಭವಿಷ್ಯದ ಬಗ್ಗೆ ಮಾರ್ಗದರ್ಶನವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ರಘುನಾಥ ಮಾಬಿಯಾನ್, ಶ್ರೀ ರಾಜಶೇಖರ್ ಇವರು ಉಪಸ್ಥಿತರಿದ್ದರು. ಹಾಗೂ ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷರಾದ ಶಶಿಧರ್ ಎಂ ಅಮೀನ್, ಕಾರ್ಯದರ್ಶಿ ಆನಂದ ಪೂಜಾರಿ ಕಿದಿಯೂರು, ಕೋಶಾಧಿಕಾರಿ ಗೋಪಾಲ ಪೂಜಾರಿ, ಜೊತೆ ಕಾರ್ಯದರ್ಶಿಯಾದ ಸದಾನಂದ ಜಿ ಅಮೀನ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜನಾರ್ದನ ಸಿ ಕರ್ಕೇರ, ಅಶೋಕ್ ಪೂಜಾರಿ, ಪಿ ಕೆ ಶಂಕರ್, ಸದಾನಂದ ಪೂಜಾರಿ ಬನ್ನಂಜೆ, ನಾರಾಯಣ ಜತ್ತನ್, ಉದಯ ಪೂಜಾರಿ, ಲಕ್ಷ್ಮಣ ಪೂಜಾರಿ, ಪ್ರವೀಣ್ ಆರ್ ಸುವರ್ಣ, ಯು. ದೀಪಕ್ ಕಿರಣ್, ಪೂರ್ಣಿಮಾ ಎಸ್ ಅಂಚನ್ ಹಾಗೂ ವಿದ್ಯಾನಿಧಿ ಸಂಚಾಲಕರಾದ ಕೃಷ್ಣಪ್ಪ ಅಂಚನ್, ಗಣೇಶ್ ಕೋಟ್ಯಾನ್, ಎಸ್ ಟಿ ಕುಂದರ್, ದಯಾನಂದ ಬನ್ನಂಜೆ, ಪ್ರಭಾಕರ ಪೂಜಾರಿ, ಕರುಣಾಕರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.